ಬೈಂದೂರು, ಡಿಸೆಂಬರ್ 27: ಇಲ್ಲಿಗೆ ಸಮೀಪದ ಶಿರೂರು ಪೆಟ್ರೋಲ್ ಬಂಕ್ ಎದುರು ಇಂದು ಸಂಜೆ ಕ್ವಾಲಿಸ್ ಹಾಗೂ ಶಾಲಾಟೆಂಪೂ ವಾಹನಗಳ ನಡುವಣ ಅಪಘಾತದಲ್ಲಿ ಓರ್ವರು ಮೃತಪಟ್ಟು ಓರ್ವ ವಿದ್ಯಾರ್ಥಿನಿ ಸಹಿತ ಏಳು ಜನರಿಗೆ ಗಾಯವಾದ ವರದಿಯಾಗಿದೆ.

ಮೃತವ್ಯಕ್ತಿಯನ್ನು ಬೆಂಗಳೂರು ನಿವಾಸಿ ಆನಂದ್ (೫೦) ಎಂದು ಗುರುತಿಸಲಾಗಿದ್ದು ಇವರು ಕ್ವಾಲಿಸ್ ವಾಹನವನ್ನು ಚಲಾಯಿಸುತ್ತಿದ್ದರು. ಗಾಯಗೊಂಡ ವಿದ್ಯಾರ್ಥಿನಿ ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್ ನ ಹತ್ತನೆಯ ತರಗತಿಯ ವಿದ್ಯಾರ್ಥಿನಿ ನಾಝಿಯಾ ನುಝ್ರತ್ (೧೬) ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳನ್ನು ಬೆಂಗಳೂರು ನಗರದ ಎಗ್ಗಿನಳ್ಳಿ ನಿವಾಸಿಗಳಾದ ಧನಲಕ್ಷ್ಮಿ (೪೦), ಶರತ್ (೧೦), ಜಯರಾಂ (೩೭), ಉದಯ (೧೯), ಲಾವಣ್ಯ (೧೩) ಹಾಗೂ ಶಿವಣ್ಣ (೩೫) ಎಂದು ಗುರುತಿಸಲಾಗಿದೆ.
ಕ್ವಾಲಿಸ್ ಪ್ರಯಾಣಿಕರು ಮುರ್ಡೇಶ್ವರ ಪ್ರವಾಸ ಮುಗಿಸಿ ಧರ್ಮಸ್ಥಳದೆಡೆಗೆ ತೆರಳುತ್ತಿದ್ದರು. ದಾರಿಯಲ್ಲಿ ತೌಹೀದ್ ಶಾಲೆಯ ಟೆಂಪೋ ವಾಹನ ಢಿಕ್ಕಿ ಹೊಡೆಯಿತು.








ಟೆಂಪೋ ಚಾಲಕನ ವಿರುದ್ಧ ಬೈಂದೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಮಾನವೀಯತೆ ಮೆರೆದ ನಾವುಂದದ ಮುಸ್ಲಿಂ ಯುವಕರು:
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾವುಂದದ ಮುಸ್ಲಿಂ ಯುವಕರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಅಮೂಲ್ಯ ಮಾನವಪ್ರಾಣಗಳನ್ನು ಕಾಪಾಡಲು ನೆರವಾಗಿದ್ದಾರೆ. ಜಾತೀಯತೆಯನ್ನು ಮರೆಸಿದ ಬಾಂಧವ್ಯ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.